•  
  •  
  •  
  •  
Index   ವಚನ - 48    Search  
 
ನಾರಿಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ. ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ ನಿಶ್ಚಯಿಸಿದ ಮನ ವಸ್ತುವಿನಲ್ಲಿ ಕೂಡಿ ಕಾಯದ ಕರಂಡದಲ್ಲಿ ಕರಣಂಗಳರತು ಜೀವ ಕೆಟ್ಟು ಪರಮನಾದಂತೆ. ಈ ಭೇದವನರಿದು ಕಾಲನ ಗೆದ್ದು ಕಾಲಾಂತಕ ಭೀಮೇಶ್ವರಲಿಂಗವು ತಾನಾದನು.
Transliteration Nārikēḷa huṭṭida sujalava allige eydisi eredavarilla adu balidu alliyē aratāga bērondu koṇḍudilla. Appuvaratu tuppa tannalliye odagidante niścayisida mana vastuvinalli kūḍi kāyada karaṇḍadalli karaṇaṅgaḷaratu jīva keṭṭu paramanādante. Ī bhēdavanaridu kālana geddu kālāntaka bhīmēśvaraliṅgavu tānādanu.