•  
  •  
  •  
  •  
Index   ವಚನ - 69    Search  
 
ಮಹಾಕಾಳಾಂಧರ ಹಿಂಗಿ ಕಾಲಂಗಳಹಾಗ ಮಾಯಾಂಗನೆ ಮಹಾದೇವನ ಮರೆದವರಿಗೆ ಮಾರಿಯಾದಳು. ಸತ್ಕ್ರೀಸಜ್ಜನಯುಕ್ತಿಯಿಂದ ಸದಾಶಿವನನರಿಯಲಾಗಿ ಉಮಾದೇವಿಯಾದಳು. ಇಂತೀ ಗುಣವ ಮರೆದಡೆ ಮಾಯೆಯಾಗಿ ಅರಿದಡೆ ಸ್ವಯವಾಗಿ ತನ್ನಲ್ಲಿ ಅನ್ಯಭಿನ್ನವಿಲ್ಲದೆ ಢಕ್ಕೆಯ ಉಲುಹಡಗುವುದಕ್ಕೆ ಮೊದಲೆ ಕಾಲಾಂತಕ ಭೀಮೇಶ್ವರಲಿಂಗವನರಿಯಬೇಕು.
Transliteration Mahākāḷāndhara hiṅgi kālaṅgaḷahāga māyāṅgane mahādēvana maredavarige māriyādaḷu. Satkrīsajjanayuktiyinda sadāśivananariyalāgi umādēviyādaḷu. Intī guṇava maredaḍe māyeyāgi aridaḍe svayavāgi tannalli an'yabhinnavillade ḍhakkeya uluhaḍaguvudakke modale kālāntaka bhīmēśvaraliṅgavanariyabēku.