ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ
ಸುಷಪ್ತಿಯಲ್ಲಿ ಉಭಯಭ್ರಾಂತಿಲ್ಲದೆ
ದೃಷ್ಟದಲ್ಲಿ ಕಂಡುದಕ್ಕೆ ಆ ಜ್ಞಾನದಲ್ಲಿ ಭಾವಿಸುವುದಕ್ಕೆ
ಆ ಜ್ಞಾನ ಉಭಯದೋರದೆ ಸ್ವಯವಾದುದು.
ಉಭಯಗುಣ ನಾಸ್ತಿ ಪ್ರಾಣಲಿಂಗ ಸಂಬಂಧ
ಕಾಲಾಂತಕ ಭೀಮೇಶ್ವರಲಿಂಗದಲ್ಲಿ.
Transliteration Liṅga prāṇavādalli jāgra svapna
suṣaptiyalli ubhayabhrāntillade
dr̥ṣṭadalli kaṇḍudakke ā jñānadalli bhāvisuvudakke
ā jñāna ubhayadōrade svayavādudu.
Ubhayaguṇa nāsti prāṇaliṅga sambandha
kālāntaka bhīmēśvaraliṅgadalli.