•  
  •  
  •  
  •  
Index   ವಚನ - 10    Search  
 
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ? ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ, ನಾ ನಿನ್ನ ಕಣ್ಣಿಂದ ಕಂಡೆನು, ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ. ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ! ಗುಹೇಶ್ವರಾ, ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
Transliteration Enna nānariyadandu munna nīnēnāgirde hēḷā? Munna (nī) bāya muccikoṇḍirde embuda, nā ninna kaṇṇinda kaṇḍenu, enna nānarida baḷika innu nī bāyideredu mātanāḍidaḍe adanenna kaṇṇinda kaṇḍu nācide nōḍā. Enna kāba ninage, ninna kāba enage, sambandha ondē nōḍā! Guhēśvarā ninna beḍagina binnāṇava nānaride nōḍā.
Hindi Translation मैं अपने आप जानने के पूर्व तुम क्या थे कहो ? पहले तुम चुप थे यह मैं तुम्हारी आँखों से जाना खुद मैं अपने को जानने पर अब तुम मुँह खोलकर बोले तो अपनी आँखों से देख लज्जित हुआ देखो ! तुमने मुझे देखा, मैंने तुझे देखा युक्ति की दृष्टि एक ही है ; गुहेश्वरा, तुम्हारे नखरे की चतुरता जाना देखो। Translated by: Eswara Sharma M and Govindarao B N
Tamil Translation என்னை நான் அறியும் முன்பு நீ என்னவாகி இருந்தாய், கூறுவாயா? முன்பு நீ மௌனமாக இருந்தாய் என்பதை நான் உன் கண்களால் கண்டேன் என்னை நான் அறிந்த பிறகு நீ வாய்திறந்து பேசியதை என் கண்ணால் கண்டு நாணினேன் கண்டாய்! என்னைக்காணும் உனக்கு, உன்னைக் காணும் எனக்கு விகற்பமற்ற நோட்டம் ஒன்றே காணாய்! குஹேசுவரனே, கட்புலனாகா உன் வடிவினை உணர்ந்தேன் காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಬೆಡಗಿನ ಬಿನ್ನಾಣ = ನಿಗೂಢವಾದ ಸ್ವರೂಪ; Written by: Sri Siddeswara Swamiji, Vijayapura

C-547 

  Sat 04 Jan 2025  

 ಕನ್ನಡದಲ್ಲಿ ಅರ್ಥ ವಿವರಣೆ ನೀಡಿದ್ದರೆ ಎಲ್ಲಾ ಜನರಿಗೂ ಅರ್ಥ ಆಗ್ತಾ ಇತ್ತು ಎಷ್ಟೋ ಜನಕ್ಕೆ ವಚನ ಓದಿ ಅರ್ಥ ಮಾಡಿಕೊಳ್ಳುವ ಅರ್ಹತೆ ಇಲ್ಲ ಆದ ಕಾರಣ ಮುಂದಿನ ದಿನಗಳಲ್ಲಿ ಈ ಆಪ್ ಅಪ್ಡೇ ಟ್ ಮಾಡುವಾಗ ಈ ನನ್ನ ಕೋರಿಕೆ ಗಮನಿಸಿ ನಿಮ್ಮ ಈ ಪ್ರಯತ್ನಕ್ಕೆ ನಾ ಶರಣು 🙏
  Chandrashekar
Mysuru