ಅಂಥ ಬ್ರಹ್ಮಾಂಡವ ಹತ್ತುಕೋಟಿಯ ಮೇಲೆ
ಎರಡು ಸಾವಿರದಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಶಾಘ್ರವೆಂಬ ಭುವನ.
ಆ ಭುವನದೊಳು ಅತಿಮಹಾವೀರಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರ ಕೋಟಿಯ ಮೇಲೆ ತೊಂಬತ್ತೆಂಟು ಕೋಟಿ
ರುದ್ರ ನಾರಾಯಣ ಬ್ರಹ್ಮರಿಹರು.
ಸಾವಿರ ಕೋಟಿಯ ಮೇಲೆ ತೊಂಬತ್ತುಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Antha brahmāṇḍava hattukōṭiya mēle
eraḍu sāviradā embatteṇṭu brahmāṇḍavanoḷakoṇḍudondu
śāghravemba bhuvana.
Ā bhuvanadoḷu atimahāvīraghōranemba rudramūrti ihanu.
Ā rudramūrtiya ōlagadalli
sāvira kōṭiya mēle tombatteṇṭu kōṭi
rudra nārāyaṇa brahmariharu.
Sāvira kōṭiya mēle tombattukōṭi vēdapuruṣaru
indracandrādityaru munīndraru dēvarkaḷiharu nōḍā
apramāṇakūḍalasaṅgamadēvā.