ಅಂಥ ಬ್ರಹ್ಮಾಂಡವ ನಾಲ್ಕುನೂರು ಕೋಟಿಯ ಮೇಲೆ
ನಾಲ್ಕು ಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಕೂಷ್ಮಾಂಡವೆಂಬ ಭುವನ.
ಆ ಭುವನದೊಳು ಬ್ರಹ್ಮನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಮೂನ್ನೂರೆಂಬತ್ತು ನಾಲ್ಕುಕೋಟಿಯ ಮೇಲೆ
ಐನೂರೆಪ್ಪತ್ತಾರುಕೋಟಿ
ನಾರಾಯಣ ಬ್ರಹ್ಮ ರುದ್ರರಿಹರು.
ಸಾವಿರಕೋಟಿಯ ಮೇಲೆ ಮೂನ್ನೂರೆಂಬತ್ತು ನಾಲ್ಕುಕೋಟಿಯ ಮೇಲೆ
ಐನೂರೆಪ್ಪತ್ತಾರುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Antha brahmāṇḍava nālkunūru kōṭiya mēle
nālku sāviradā hadineṇṭu brahmāṇḍavanoḷakoṇḍudondu
kūṣmāṇḍavemba bhuvana.
Ā bhuvanadoḷu brahmanāthanemba mahārudramūrti ihanu.
Ā rudramūrtiya ōlagadalli
sāvirakōṭiya mēle mūnnūrembattu nālkukōṭiya mēle
ainūreppattārukōṭi
nārāyaṇa brahma rudrariharu.
Sāvirakōṭiya mēle mūnnūrembattu nālkukōṭiya mēle
ainūreppattārukōṭi vēdapuruṣaru
munīndraru indracandrādityaru dēvarkaḷiharu nōḍā
apramāṇakūḍalasaṅgamadēvā.