•  
  •  
  •  
  •  
Index   ವಚನ - 238    Search  
 
ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು, ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷಿ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು. ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ, ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ, ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ: ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ || ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ || ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Innu akhaṇḍaparipūrṇa apramāṇa agōcara apramēya avyakta anantatēja anantapracaya anantakōṭi sūryacandrāgniprakāśavāgiha mahāghanaliṅgadalli viśvatō mukha, viśvatō cakṣu, viśvatō hasta, viśvatō pāda, viśvatō bāhuvanuḷḷa anādi sadāśivatatva utpatyavāyittu. Ā sadāśivana īśānamukhadalli ākāśa utpatyavāyittu. Ā anādi śivatatvadinda anēka mukha, anēka cakṣu, anēka bāhu, anēka pādavanuḷḷa anādi īśvaratatva utpatyavāyittu. Ā anādi īśvaratatvadalli sahasra śira, sahasra akṣi,Sahasra bāhu, sahasra pādavanuḷḷa anādi mahēśvaratatva utpatyavāyittu. Ā anādi mahēśvaratatvadalli tripan̄camukha, tridaśabhuja, tridaśapādavanuḷḷa ādi sadāśiva utpatyavāyittu. Ā ādi sadāśivatatvadalli ṣaṣṭha vaktra, dvādaśabhuja, tripādavanuḷḷa ādi īśvaratatva utpatyavāyittu. Ā ādi īśvaratatvadalli pan̄cavinśati mukha, pan̄cadaśabhujavanuḷḷa sadāśivatatva utpatyavāyittu. Idakke ati mahāgamē: Akhaṇḍaliṅga sambhūtā anādi sādākhyastathā | anādi viśvatōmukhatatvē ca anādi īśvarōdbhavaḥ || Anādi īśvaratatvē ca anādi māhēśvarō bhavēt | anādi māhēśvara śambhuto ādi sadākhya stathā || ādi sādākhyatatvē ca ādi īśvarōdbhavaṁ | ādi īśvaratatvē ca ādi māhēśvarō bhavēt || ādi māhēśvara śambhuto śivasadāśivāyuvō | iti tatvōdbhavajñānaṁ durlabhaṁ kamalānanē ||'' intendudāgi, apramāṇakūḍalasaṅgamadēvā.