•  
  •  
  •  
  •  
Index   ವಚನ - 245    Search  
 
ಇನ್ನು ಪಿಂಡ ಉತ್ಪತ್ಯವದೆಂತೆಂದಡೆ: ಆ ಪೃಥ್ವಿಯಲ್ಲಿ ಅನ್ನ ಉತ್ಪತ್ಯವಾಯಿತ್ತು; ಆ ಅನ್ನದಲ್ಲಿ ರಸ ಉತ್ಪತ್ಯವಾಯಿತ್ತು; ಆ ರಸದಲ್ಲಿ ರುಧಿರ ಉತ್ಪತ್ಯವಾಯಿತ್ತು; ಆ ರುಧಿರದಲ್ಲಿ ಮಾಂಸ ಉತ್ಪತ್ಯವಾಯಿತ್ತು; ಆ ಮಾಂಸದಲ್ಲಿ ಮೇದಸ್ಸು ಉತ್ಪತ್ಯವಾಯಿತ್ತು; ಆ ಮೇದಸ್ಸುವಿನಲ್ಲಿ ಅಸ್ಥಿ ಉತ್ಪತ್ಯವಾಯಿತ್ತು; ಆ ಅಸ್ಥಿಯಲ್ಲಿ ಮಜ್ಜೆ ಉತ್ಪತ್ಯವಾಯಿತ್ತು; ಆ ಮಜ್ಜೆಯಲ್ಲಿ ಶುಕ್ಲ ಉತ್ಪತ್ಯವಾಯಿತ್ತು. ಇದಕ್ಕೆ ಕಾತ್ಯಾಯಿನಿ ಶ್ರುತಿ: ಪೃಥುವೀರಂ ನ ಸಂಭೂತಿಃ ಅನ್ನಾತ್ ರಸಸಂಭವಃ | ರಸೇನ ರುಧಿರೋ ಜಾತ ರುಧಿರಾತ್ ಮಾಂಸಸಂಭವಃ || ಮಾಂಸೇನ ಮೇದಸ್ಸಂಭೂತಿಃ ಮೇದಸಾ ಅಸ್ಥಿಸಮುದ್ಭವಃ | ಅಸ್ಥಿನಾ ಮಜ್ಜಾ ಸಂಭೂತಾ ಮಜ್ಜೇ ಶುಕ್ಲಂ ಚ ಜಾಯತೇ ||'' ಇಂತೆಂದುದಾಗಿ ಅಪ್ರಮಾಣ ಕೂಡಲಸಂಗಮದೇವಾ.
Transliteration Innu piṇḍa utpatyavadentendaḍe: Ā pr̥thviyalli anna utpatyavāyittu; ā annadalli rasa utpatyavāyittu; ā rasadalli rudhira utpatyavāyittu; ā rudhiradalli mānsa utpatyavāyittu; ā mānsadalli mēdas'su utpatyavāyittu; ā mēdas'suvinalli asthi utpatyavāyittu; ā asthiyalli majje utpatyavāyittu; ā majjeyalli śukla utpatyavāyittu.Idakke kātyāyini śruti: Pr̥thuvīraṁ na sambhūtiḥ annāt rasasambhavaḥ | rasēna rudhirō jāta rudhirāt mānsasambhavaḥ || mānsēna mēdas'sambhūtiḥ mēdasā asthisamudbhavaḥ | asthinā majjā sambhūtā majjē śuklaṁ ca jāyatē ||'' intendudāgi apramāṇa kūḍalasaṅgamadēvā.