•  
  •  
  •  
  •  
Index   ವಚನ - 254    Search  
 
ಪಂಚವಿಂಶತಿರಾತ್ರಿಗೆ ಪಂಚಾಂಕುರ ಸಂಪೂರ್ಣವಹುದು. ಏಕಮಾಸಕ್ಕೆ ಪಂಚತತ್ವ ಸಂಪೂರ್ಣವಾಗಿ ಧರಿಸೂದು. ದ್ವಿಮಾಸಕ್ಕೆ ಮಾಂಸ ಮೇದಸ್ಸು ಜನಿಸುವುದು. ಇದಕ್ಕೆ ಶ್ರೀಗರ್ಭ ಉವಾಚ: ಪಂಚವಿಂಶತಿ ಸಂಪೂರ್ಣೇ ಫಲಪಂಚಾಂಕುರಾಯತೇ | ಮಾಸೇನೈಕೇನ ಸಂಪೂರ್ಣಂ ಪಂಚತತ್ವಾನಿ ಧಾರಯೇತ್ | ಮಾಸದ್ವಯೇನ ಸಂಪೂರ್ಣಂ ಮಾಂಸಮೇದಃ ಪ್ರಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Pan̄cavinśatirātrige pan̄cāṅkura sampūrṇavahudu. Ēkamāsakke pan̄catatva sampūrṇavāgi dharisūdu. Dvimāsakke mānsa mēdas'su janisuvudu. Idakke śrīgarbha uvāca: Pan̄cavinśati sampūrṇē phalapan̄cāṅkurāyatē | māsēnaikēna sampūrṇaṁ pan̄catatvāni dhārayēt | māsadvayēna sampūrṇaṁ mānsamēdaḥ prajāyatē ||'' intendudāgi, apramāṇakūḍalasaṅgamadēvā.