ಇನ್ನು ಅಗ್ನಿಧಾರಣವೆಂತೆಂದಡೆ:
ಮೂಲಜ್ವಾಲೆಯನೆಬ್ಬಿಸಿ ಸುಷುಮ್ನನಾಳದ
ಬಟ್ಟೆಯ ತುದಿಯನಡರಿ
ಸಹಸ್ರದಳಮಂಟಪನೊಳಹೊಕ್ಕು ನೋಡಿ
ಅಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು,
ವಿಶ್ವತೋಹಸ್ತ, ವಿಶ್ವತೋಪಾದವನುಳ್ಳ
ಮಹಾಗುರುವಂ ಕಂಡು ಪರಿಣಾಮಿಸುತ್ತಿರ್ದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Innu agnidhāraṇaventendaḍe:
Mūlajvāleyanebbisi suṣumnanāḷada
baṭṭeya tudiyanaḍari
sahasradaḷamaṇṭapanoḷahokku nōḍi
alli viśvatōmukha, viśvatōcakṣu,
viśvatōhasta, viśvatōpādavanuḷḷa
mahāguruvaṁ kaṇḍu pariṇāmisuttirdanu nōḍā
apramāṇakūḍalasaṅgamadēvā.