ಪರದಲ್ಲಿ ಮನವ ಶಿಲ್ಕಿಸಿ
ನಾಶಿಕಾಗ್ರದ ಮೇಲೆ ನಯನಾಂಬುಧಿಗಳಂ ತುಂಬಿ,
ಮೂಲಜ್ವಾಲೆಯ ಸುಷುಮ್ನನಾಳದ ಬಟ್ಟೆಯತುದಿಯನಡರಿ,
ಬ್ರಹ್ಮರಂಧ್ರವ ಮುಟ್ಟಿ, ಮೂಲಾಧಾರಮಂಡಲ ನಿಶ್ವಾಸಮಂ ಪಿಡಿದು,
ಹೊರಡದೆ ಸಾಧಿಸುವ ಯೋಗಿಗಳಿಗೆ ಮೇಲೆ ಕೊಡನುಕ್ಕಿತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Paradalli manava śilkisi
nāśikāgrada mēle nayanāmbudhigaḷaṁ tumbi,
mūlajvāleya suṣumnanāḷada baṭṭeyatudiyanaḍari,
brahmarandhrava muṭṭi, mūlādhāramaṇḍala niśvāsamaṁ piḍidu,
horaḍade sādhisuva yōgigaḷige mēle koḍanukkitu nōḍā
apramāṇakūḍalasaṅgamadēvā.