•  
  •  
  •  
  •  
Index   ವಚನ - 344    Search  
 
ಇನ್ನು ಅಂಗತ್ರಯಂಗಳಲ್ಲಿ ಲಿಂಗತ್ರಯಸ್ವಾಯತವದೆಂತೆಂದಡೆ: ಸುಷುಪ್ತಾವಸ್ಥೆಯೆಂಬ ಯೋಗಾಂಗದಲ್ಲಿ ಭಾವಲಿಂಗ ಸ್ವಾಯತವಾಗಿಹುದು. ಸ್ವಪ್ನಾವಸ್ಥೆಯೆಂಬ ಭೋಗಾಂಗದಲ್ಲಿ ಪ್ರಾಣಲಿಂಗ ಸ್ವಾಯತವಾಗಿಹುದು. ಜಾಗ್ರಾವಸ್ಥೆಯೆಂಬ ತ್ಯಾಗಾಂಗದಲ್ಲಿ ಇಷ್ಟಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಈಶ್ವರೋsವಾಚ: ``ಲಿಂಗಂ ತತ್ಪದಮಾಖ್ಯಾತಂ ಅಂಗಂ ತ್ವಂ ಪದಮೀರಿತಂ | ಸಂಯೋಗೋsಸಿ ಪದಂ ಪ್ರೋಕ್ತಂ ಅನಯೋರಂಗಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Innu aṅgatrayaṅgaḷalli liṅgatrayasvāyatavadentendaḍe: Suṣuptāvastheyemba yōgāṅgadalli bhāvaliṅga svāyatavāgihudu. Svapnāvastheyemba bhōgāṅgadalli prāṇaliṅga svāyatavāgihudu. Jāgrāvastheyemba tyāgāṅgadalli iṣṭaliṅga svāyatavāgihudu nōḍā. Idakke īśvarōsvāca: ``Liṅgaṁ tatpadamākhyātaṁ aṅgaṁ tvaṁ padamīritaṁ | sanyōgōssi padaṁ prōktaṁ anayōraṅgaliṅgayōḥ ||'' intendudāgi, apramāṇakūḍalasaṅgamadēvā.