ಘನಕ್ಕೆ ಘನವಾದ ಮಹಾಘನದೋಂಕಾರವಿಲ್ಲದಂದು,
ಪರಮ ಅಕಾರ ಪರಮ ಉಕಾರ ಪರಮ ಮಕಾರವಿಲ್ಲದಂದು,
ಅನಾದಿ ಅಕಾರ ಅನಾದಿ ಉಕಾರ ಅನಾದಿ ಮಕಾರವಿಲ್ಲದಂದು,
ಆದಿ ಅಕಾರ ಆದಿ ಉಕಾರ ಆದಿ ಮಕಾರ,
ಅಕಾರ ಉಕಾರ ಮಕಾರವಿಲ್ಲದಂದು,
ಪ್ರಕೃತಿ ಪ್ರಣವ ಓಂಕಾರ ಉತ್ಪತ್ಯವಾಗದಂದು,
ನಿರಂಜನ ಪ್ರಣವವಾಗಿರ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ.
Transliteration Ghanakke ghanavāda mahāghanadōṅkāravilladandu,
parama akāra parama ukāra parama makāravilladandu,
anādi akāra anādi ukāra anādi makāravilladandu,
ādi akāra ādi ukāra ādi makāra,
akāra ukāra makāravilladandu,
prakr̥ti praṇava ōṅkāra utpatyavāgadandu,
niran̄jana praṇavavāgirdanayya illadante
nam'ma apramāṇakūḍalasaṅgamadēva