•  
  •  
  •  
  •  
Index   ವಚನ - 394    Search  
 
ಏನೂ ಏನೂ ಎನಲಿಲ್ಲದ ಅನಾದಿ ಪ್ರಣವದ ನೆನಹು ಮಾತ್ರದಲ್ಲಿಯೇ ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು. ಆ ಅನಾದಿ ಅಕಾರ, ಆ ಅನಾದಿ ಉಕಾರ, ಆ ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನಿರ್ದೇಶನಸ್ಥಲದ ವಚನವದೆಂತೆಂದಡೆ: ಅಕಾರ ಉಕಾರ ಮಕಾರವೆಂಬ ನಿರಾಕಾರಪ್ರಣವತ್ರಯದ ಮೇಲೆ ನಿರ್ವಯಲು ಬಂದು ಕುಳ್ಳಿರದಂದು, ಬಯಲು ನಿರ್ವಯಲೆಂಬಾ ನಾಮ ತಲೆದೋರದಂದು, ಪ್ರರಬ್ರಹ್ಮಲೀಲೆಯು ನಿಂದು ಏನೂ ಏನೂ ಎನಲಿಲ್ಲದಂದು, ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
Transliteration Ēnū ēnū enalillada anādi praṇavada nenahu mātradalliyē anādi akāra, anādi ukāra, anādi makāravemba praṇavatrayaṅgaḷutpatyavāyittu. Ā anādi akāra, ā anādi ukāra, ā anādi makāravemba praṇavatrayaṅgaḷa nirdēśanasthalada vacanavadentendaḍe: Akāra ukāra makāravemba nirākārapraṇavatrayada mēle nirvayalu bandu kuḷḷiradandu, bayalu nirvayalembā nāma taledōradandu, prarabrahmalīleyu nindu ēnū ēnū enalilladandu, anādi akāra, anādi ukāra, anādi makāravemba praṇavatrayavāgiddanu nōḍā illadante nam'ma apramāṇakūḍalasaṅgamadēva.