ಆ ಆದಿ ಉಕಾರ, ಆ ಆದಿ ಮಕಾರ, ಆ ಆದಿ ಅಕಾರಕ್ಕೆ
ಆ ಆದಿಬಿಂದು, ಆ ಆದಿಕಲೆ, ಆ ಆದಿನಾದವೆ ಆಧಾರ.
ಆ ಆದಿಬಿಂದು, ಆದಿಕಲೆ, ಆದಿನಾದಕ್ಕೆ ಆ ಆದಿಪ್ರಕೃತಿಯೇ ಆಧಾರ.
ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಪ್ರಣವವೇ ಆಧಾರ.
ಆ ಪ್ರಾಣಮಾತ್ರೆಪ್ರಣವಕ್ಕೆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ.
ಉ ಎಂದರೆ ಆದಿಬಿಂದುಳಿದು
ಮ ಎಂಬ ಆದಿಕಲೆಯಲ್ಲಿ ಸಂಯುಕ್ತವಾಗಿ,
ಅ ಎಂಬ ಆದಿನಾದದಲ್ಲಿ ಮ ಎಂಬ ಅನುಸ್ವಾರ ಬಂದು ಕೂಡಲು,
ಅಖಂಡಜ್ಯೋತಿರ್ಮಯವಾಗಿಹ
ಪರಮೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ā ādi ukāra, ā ādi makāra, ā ādi akārakke
ā ādibindu, ā ādikale, ā ādinādave ādhāra.
Ā ādibindu, ādikale, ādinādakke ā ādiprakr̥tiyē ādhāra.
Ā ādiprakr̥tipraṇavakke prāṇamātrepraṇavavē ādhāra.
Ā prāṇamātrepraṇavakke akhaṇḍajyōtirmayaliṅgavē ādhāra.
U endare ādibinduḷidu
ma emba ādikaleyalli sanyuktavāgi,
a emba ādinādadalli ma emba anusvāra bandu kūḍalu,
akhaṇḍajyōtirmayavāgiha
paramōṅkāravāyittu nōḍā
apramāṇakūḍalasaṅgamadēvā.