•  
  •  
  •  
  •  
Index   ವಚನ - 503    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರಪ್ರಣವದ ತಾರಕಾಸ್ವರೂಪದಲ್ಲಿ ಪೃಥ್ವಿಯೆಂಬ ಮಹಾಭೂತವಿಹುದು. ಆ ಪ್ರಣವದ ದಂಡಸ್ವರೂಪದಲ್ಲಿ ಅಪ್ಪುವೆಂಬ ಮಹಾಭೂತವಿಹುದು. ಆ ಪ್ರಣವದ ಕುಂಡಲಾಕಾರದಲ್ಲಿ ತೇಜವೆಂಬ ಮಹಾಭೂತವಿಹುದು. ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯುವೆಂಬ ಮಹಾಭೂತವಿಹುದು. ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶವೆಂಬ ಮಹಾಭೂತವಿಹುದು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನೆಂಬ ಮಹಾಭೂತವಿಹುದು ನೋಡಾ. ಇದಕ್ಕೆ ಚಿತ್ಪಿಂಡಾಗಮೇ: ಓಂಕಾರ ತಾರಕರೂಪೇ ಪೃಥ್ವೀಭೂತಂ ಸಮಾಚರೇತ್ | ಓಂಕಾರ ದಂಡರೂಪೇ ಚ ಅಪ್‍ಭೂತ ಸಮಾಶ್ರಿತಾಃ || ಓಂಕಾರ ಕುಂಡಲಾಕಾರೇ ತೇಜಭೂತಃ ತಥಾ ಭವೇತ್ | ಓಂಕಾರ ಅರ್ಧಚಂದ್ರೇ ಚ ವಾಯುಭೂತಂ ಚ ವರ್ತತೇ || ಓಂಕಾರ ದರ್ಪಣಾಕಾರೇ ವ್ಯೋಮಭೂತಂ ಸದಾ ಶ್ರಿತಾಃ | ಓಂಕಾರ ಜ್ಯೋತಿರೂಪೇ ಚ ಆತ್ಮಭೂತಾಶ್ರಿತಂ ತಥಾ | ಇತಿ ಷಷ್ಠಭೂತಂ ದೇವಿ ಸ್ಥಾನ ಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Ā akhaṇḍa jyōtirmayavāgiha paramōṅkārapraṇavada tārakāsvarūpadalli pr̥thviyemba mahābhūtavihudu. Ā praṇavada daṇḍasvarūpadalli appuvemba mahābhūtavihudu. Ā praṇavada kuṇḍalākāradalli tējavemba mahābhūtavihudu. Ā praṇavada ardhacandrakadalli vāyuvemba mahābhūtavihudu. Ā praṇavada darpaṇākāradalli ākāśavemba mahābhūtavihudu. Ā praṇavada jyōtisvarūpadalli Ātmanemba mahābhūtavihudu nōḍā. Idakke citpiṇḍāgamē: Ōṅkāra tārakarūpē pr̥thvībhūtaṁ samācarēt | ōṅkāra daṇḍarūpē ca apbhūta samāśritāḥ || ōṅkāra kuṇḍalākārē tējabhūtaḥ tathā bhavēt | ōṅkāra ardhacandrē ca vāyubhūtaṁ ca vartatē || ōṅkāra darpaṇākārē vyōmabhūtaṁ sadā śritāḥ | ōṅkāra jyōtirūpē ca ātmabhūtāśritaṁ tathā | iti ṣaṣṭhabhūtaṁ dēvi sthāna sthānē samācarēt ||'' intendudāgi, apramāṇakūḍalasaṅgamadēvā.