•  
  •  
  •  
  •  
Index   ವಚನ - 517    Search  
 
ವ್ಯೋಮವೇ ಅಂಗವಾದ ಶರಣನ ಸುಜ್ಞಾನಹಸ್ತದಲ್ಲಿಹ ಪ್ರಸಾದಲಿಂಗವು ಪರಂಜ್ಯೋತಿಸ್ವರೂಪವಾಗಿ, ನಿತ್ಯವಾಗಿ, ಪರಿಪೂರ್ಣವಾಗಿ ಇಂದ್ರಿಯಾರ್ಥಂಗಳೆಂದು ವಿಷಯಂಗಳು ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ವಿಷಯಂಗಳನು ಮೀರಿ ವರ್ತಿಸುವುದಾಗಿ, ಜ್ಞಾನದಿಂದ ಹಡೆಯಲ್ಪಟ್ಟಂಥಾ ಮೋಕ್ಷಸ್ವರೂಪವಾಗಿ, ಪರಿಣಾಮಪ್ರಪಂಚಕ್ಕೆ ಕಾರಣವಾದುದಾಗಿ, ಸ್ವಾದವೆಂಬ ನಾಮವನುಳ್ಳ ತತ್ವವನು ಪರೆಯೆಂಬ ತನ್ನ ಶಕ್ತಿಯಿಂದುದಯಿಸಿದುದಾಗಿ ನಾಮರೂಪಗಳಿಲ್ಲದಂಥಾ ಪ್ರಸಾದವೆಂಬ ಮಹಾಘನಲಿಂಗವಾಗಿ ಹೇಳುತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ಜ್ಯೋತಿಃಪರಂ ನಿಜಮುಖಂಡಮತೀಂದ್ರಿಯಾರ್ಥಂ ಜ್ಞಾನೋಪಲಬ್ಧಮಮೃತಂ ಪರಯಾ ಸ್ವಶಕ್ತಾ ಪ್ರಾಹುಃ ಪ್ರಸಾದಘನಲಿಂಗಮುಪಾಧಿಹೀನಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Vyōmavē aṅgavāda śaraṇana sujñānahastadalliha prasādaliṅgavu paran̄jyōtisvarūpavāgi, nityavāgi, paripūrṇavāgi indriyārthaṅgaḷendu viṣayaṅgaḷu śabda sparśa rūpa rasa gandhaṅgaḷemba viṣayaṅgaḷanu mīri vartisuvudāgi, jñānadinda haḍeyalpaṭṭanthā mōkṣasvarūpavāgi, pariṇāmaprapan̄cakke kāraṇavādudāgi, svādavemba nāmavanuḷḷa tatvavanu pareyemba tanna śaktiyindudayisidudāgi nāmarūpagaḷilladanthā prasādavemba Mahāghanaliṅgavāgi hēḷutiharu nōḍā. Idakke mahāvātulāgamē: Vr̥tta- jyōtiḥparaṁ nijamukhaṇḍamatīndriyārthaṁ jñānōpalabdhamamr̥taṁ parayā svaśaktā prāhuḥ prasādaghanaliṅgamupādhihīnaṁ ||'' intendudāgi, apramāṇakūḍalasaṅgamadēvā