•  
  •  
  •  
  •  
Index   ವಚನ - 545    Search  
 
ಆ ಪ್ರಸಾದಿಯಲ್ಲಿಯ ಶರಣಂಗೆ ಅಗ್ನಿಯಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಪ್ರಸಾದಲಿಂಗವೆ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಕಪೋತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā prasādiyalliya śaraṇaṅge agniyalliya ākāśavē aṅga. Ā aṅgakke nirahaṅkāradalliya sujñānavē hasta. Ā hastakke guruliṅgadalliya prasādaliṅgave liṅga. Ā prasādaliṅgamukhadalli kapōtavarṇavāda rūpadravyavanu samarpaṇavaṁ māḍi tr̥ptiyane bhōgisuvanu nōḍā apramāṇakūḍalasaṅgamadēvā