ಗಂಗಾಧರ ಗೌರೀಶ ದೇವರಲ್ಲ, ಶಂಕರ ಶಶಿಧರ ದೇವರಲ್ಲ,
ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ,
ತ್ರಿಶೂಲ ಖಟ್ವಾಂಗಧರರು ದೇವರಲ್ಲ.
ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ
ಹಿಡಿದ ಪ್ರಳಯಕಾಲರುದ್ರ ದೇವರಲ್ಲ,
ನಿರಾಳಸ್ವಯಂಭುಲಿಂಗವ ತಾನೆಂದರಿದಡೆ
ತಾನೆ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ.
Transliteration Gaṅgādhara gaurīśa dēvaralla, śaṅkara śaśidhara dēvaralla,
pan̄camukha, daśabhujavanuḷḷa nandivāhanaru dēvaralla,
triśūla khaṭvāṅgadhararu dēvaralla.
Brahmakapāla viṣṇukaṅkāḷa daṇḍava
hiḍida praḷayakālarudra dēvaralla,
nirāḷasvayambhuliṅgava tānendaridaḍe
tāne dēva nōḍā
apramāṇakūḍalasaṅgamadēva