•  
  •  
  •  
  •  
Index   ವಚನ - 601    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ ದೇಹವ ದೇವರೆಂಬರು; ಆ ದೇಹವು ದೇವರಲ್ಲ ನೋಡಾ. ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು; ಆ ಮನ ದೇವರಲ್ಲ ನೋಡಾ. ಆ ಮನದಿಂದಾದ ಬುದ್ಧಿಯ ದೇವರೆಂಬರು; ಆ ಬುದ್ಧಿ ದೇವರಲ್ಲ ನೋಡಾ. ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು; ಆ ಚಿತ್ತ ದೇವರಲ್ಲ ನೋಡಾ. ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು; ಆ ಅಹಂಕಾರ ದೇವರಲ್ಲ ನೋಡಾ. ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು; ಆ ಅಳಿವ ಜೀವ ದೇವರಲ್ಲ ನೋಡಾ. ಇವೆಲ್ಲ ಅಳಿವವಲ್ಲದೆ ಉಳಿವವಲ್ಲ; ದೇವರಿಗೆ ಅಳುವುಂಟೆ? ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ, ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
Transliteration Pr̥thvi appu tēja vāyu ākāśavemba pan̄cabhautikada pan̄cavinśatiguṇaṅgaḷindāda dēhava dēvarembaru; ā dēhavu dēvaralla nōḍā. Sakalēndriyakkū oḍeyanāgiha manava dēvarembaru; ā mana dēvaralla nōḍā. Ā manadindāda bud'dhiya dēvarembaru; ā bud'dhi dēvaralla nōḍā. Ā bud'dhiyindāda cittava dēvarembaru; ā citta dēvaralla nōḍā. Ā cittadindāda ahaṅkārava dēvarembaru; ā ahaṅkāra dēvaralla nōḍā. Ā ahaṅkāradinda jīvanāgi aḷiva jīvava dēvarembaru; ā aḷiva jīva dēvaralla nōḍā. Ivella aḷivavallade uḷivavalla; dēvarige aḷuvuṇṭe? Aḷivillada paraśivatatvava tānendaridaḍe, tānē dēva nōḍā apramāṇakūḍalasaṅgamadēva.