•  
  •  
  •  
  •  
Index   ವಚನ - 637    Search  
 
ಇನ್ನು ನಿರಾಳ ಷಡುಚಕ್ರಂಗಳ ಮೇಲಣ ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ: ನಿರ್ವಾಣಲಿಂಗಚಕ್ರವೆಂದು, ಮಹಾನಿರ್ವಾಣಲಿಂಗಚಕ್ರವೆಂದು, ಅತಿಮಹಾನಿರ್ವಾಣಘನಲಿಂಗಚಕ್ರವೆಂದು, ಅತಿಮಹಾತೀತ ಮಹಾನಿರ್ವಾಣ ಘನಲಿಂಗಚಕ್ರವೆಂದು. ನಾಲ್ಕು ಚಕ್ರಕ್ಕೂ ಪದ್ಯವಿಲ್ಲ ವರ್ಣವಿಲ್ಲ, ಅಕ್ಷರಂಗಳಿಲ್ಲ, ಶಕ್ತಿಯಿಲ್ಲ, ಅಧಿದೇವತೆ ಇಲ್ಲ, ನಾದವಿಲ್ಲ, ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು. ಆ ಚಕ್ರಂಗಳು ವರ್ಣಕ್ಕೂ ವರ್ಣಾತೀತವಾಗಿಹುದು, ಉಪಮೆಗೆ ಉಪಮಾತೀತವಾಗಿಹುದು ಚಕ್ರಕ್ಕೂ ಚಕ್ರಾತೀತವಾಗಿಹುದೆಂದು ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Innu nirāḷa ṣaḍucakraṅgaḷa mēlaṇa nālku cakraṅgaḷa kramaventendaḍe: Nirvāṇaliṅgacakravendu, mahānirvāṇaliṅgacakravendu, atimahānirvāṇaghanaliṅgacakravendu, atimahātīta mahānirvāṇa ghanaliṅgacakravendu. Nālku cakrakkū padyavilla varṇavilla, akṣaraṅgaḷilla, śaktiyilla, adhidēvate illa, nādavilla, bījākṣaravillade beḷaguttihudu. Ā cakraṅgaḷu varṇakkū varṇātītavāgihudu, upamege upamātītavāgihudu cakrakkū cakrātītavāgihudendu cakrātītāgamadalli prasid'dhavāgi hēḷuttihudu nōḍā apramāṇakūḍalasaṅgamadēvā.