•  
  •  
  •  
  •  
Index   ವಚನ - 655    Search  
 
ಇನ್ನು ನಿರಂಜನಾತೀತ ಷಟ್‍ಸ್ಥಲ ಬ್ರಹ್ಮದ ಅರ್ಪಿತಾವಧಾನದ ಭೇದವದೆಂತೆಂದಡೆ: ನಿರಂಜನಾತೀತ ಭಕ್ತಂಗೆ ನಿರಂಜನಾತೀತವೇ ಅಂಗ, ನಿರಂಜನಾತೀತವೇ ಹಸ್ತ, ನಿರಂಜನಾತೀತವೇ ಆಚಾರಲಿಂಗ, ನಿರಂಜನಾತೀತವೆಂಬ ಮುಖದಲ್ಲಿ, ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Innu niran̄janātīta ṣaṭ‍sthala brahmada arpitāvadhānada bhēdavadentendaḍe: Niran̄janātīta bhaktaṅge niran̄janātītavē aṅga, niran̄janātītavē hasta, niran̄janātītavē ācāraliṅga, niran̄janātītavemba mukhadalli, niran̄janātītānandavemba sukhava samarpaṇavaṁ māḍi tr̥ptiyane bhōgisuvanu nōḍā apramāṇakūḍalasaṅgamadēvā