•  
  •  
  •  
  •  
Index   ವಚನ - 671    Search  
 
ಸುಷುಪ್ತಿ ಯಾವುದು? ವಚನಾದಿಗಳೈದು, ಶಬ್ದಾದಿಗಳೈದು, ಕರಣದಲ್ಲಿ ಚಿತ್ತವಲ್ಲದೆ ಮೂರು. ದಶವಾಯುಗಳಲ್ಲಿ ಪ್ರಾಣವಾಯುವಲ್ಲದೆ, ವಾಯು ಒಂಬತ್ತು. ಈ ಇಪ್ಪತ್ತುಮೂರು ಕರಣಂಗಳು ಕಂಠಸ್ಥಾನದಲ್ಲಿ ನಿಂದು ಚಿತ್ತವನು, ಪ್ರಾಣವಾಯುವನು, ಪುರುಷನನು ಈ ಮೂರು ಕರಣಂಗಳೊಡನೆ ಹೃದಯಸ್ಥಾನದಲ್ಲಿ ನಿಂದು, ಅನೇಕ ಚಿಂತನೆಯ ಮಾಡುವುದು, ಜಾಗ್ರದಲ್ಲಿ ನಿಂದರೆ ಹೇಳಲರಿಯದಿಪ್ಪುದು ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Suṣupti yāvudu? Vacanādigaḷaidu, śabdādigaḷaidu, karaṇadalli cittavallade mūru. Daśavāyugaḷalli prāṇavāyuvallade, vāyu ombattu. Ī ippattumūru karaṇaṅgaḷu kaṇṭhasthānadalli nindu cittavanu, prāṇavāyuvanu, puruṣananu ī mūru karaṇaṅgaḷoḍane hr̥dayasthānadalli nindu, anēka cintaneya māḍuvudu, jāgradalli nindare hēḷalariyadippudu suṣupti nōḍā apramāṇakūḍalasaṅgamadēvā.