•  
  •  
  •  
  •  
Index   ವಚನ - 741    Search  
 
ಇನ್ನು ಷಡ್ವಿಧಲಿಂಗನಿವೃತ್ತಿ ಅದೆಂತೆಂದಡೆ: ಆ ಪ್ರಣವದ ತಾರಕಾಕೃತಿಯಲ್ಲಿ ಆಚಾರಲಿಂಗವಡಗಿತ್ತು. ಆ ಪ್ರಣವದ ದಂಡಕಾಕೃತಿಯಲ್ಲಿ ಗುರುಲಿಂಗವಡಗಿತ್ತು. ಆ ಪ್ರಣವದ ಕುಂಡಲಾಕೃತಿಯಲ್ಲಿ ಶಿವಲಿಂಗವಡಗಿತ್ತು. ಆ ಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಜಂಗಮಲಿಂಗವಡಗಿತ್ತು. ಆ ಪ್ರಣವದ ದರ್ಪಣಾಕೃತಿಯಲ್ಲಿ ಪ್ರಸಾದಲಿಂಗವಡಗಿತ್ತು. ಆ ಪ್ರಣವದ ಜ್ಯೋತಿಸ್ತಂಭಾಕೃತಿಯಲ್ಲಿ ಮಹಾಲಿಂಗವಡಗಿತ್ತು ನೋಡಾ. ಇದಕ್ಕೆ ಶಿವಲಿಂಗಾಗಮೇ: ಓಂಕಾರ ತಾರಕರೂಪೇ ಆಚಾರಲಿಂಗಂ ಲೀಯತೇ | ಓಂಕಾರ ದಂಡಕರೂಪೇ ಗುರುಲಿಂಗಂ ಚ ಲೀಯತೇ || ಓಂಕಾರ ಕುಂಡಲಾಕಾರೇ ಶಿವಲಿಂಗಂ ಚ ಲೀಯತೇ | ಓಂಕಾರಾರ್ಧಚಂದ್ರೇಚ ಚರಲಿಂಗಂ ಚ ಲೀಯತೇ | ಓಂಕಾರ ದರ್ಪಣಾಕಾರೇ ಪ್ರಸಾದಲಿಂಗ ಲೀಯತೇ | ಓಂಕಾರ ಜ್ಯೋತಿರೂಪೇ ಚ ಮಹಾಲಿಂಗಂ ಚ ಲೀಯತೇ | ಇತಿ ಷಡ್ಲಿಂಗ ಐಕ್ಯಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Innu ṣaḍvidhaliṅganivr̥tti adentendaḍe: Ā praṇavada tārakākr̥tiyalli ācāraliṅgavaḍagittu. Ā praṇavada daṇḍakākr̥tiyalli guruliṅgavaḍagittu. Ā praṇavada kuṇḍalākr̥tiyalli śivaliṅgavaḍagittu. Ā praṇavada ardhacandrākr̥tiyalli jaṅgamaliṅgavaḍagittu. Ā praṇavada darpaṇākr̥tiyalli prasādaliṅgavaḍagittu. Ā praṇavada jyōtistambhākr̥tiyalli mahāliṅgavaḍagittu nōḍā. Idakke śivaliṅgāgamē: Ōṅkāra tārakarūpē ācāraliṅgaṁ līyatē | ōṅkāra daṇḍakarūpē guruliṅgaṁ ca līyatē || Ōṅkāra kuṇḍalākārē śivaliṅgaṁ ca līyatē | ōṅkārārdhacandrēca caraliṅgaṁ ca līyatē | ōṅkāra darpaṇākārē prasādaliṅga līyatē | ōṅkāra jyōtirūpē ca mahāliṅgaṁ ca līyatē | iti ṣaḍliṅga aikyaṁ jñātuṁ durlabhaṁ kamalānanē ||'' intendudāgi, apramāṇakūḍalasaṅgamadēvā.