ಇನ್ನು ಪಂಚಾಕ್ಷರದ ನಿವೃತ್ತಿ ಅದೆಂತೆಂದಡೆ:
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿಹ ನಕಾರದಲ್ಲಿ ನಕಾರವಡಗಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ
ಯಕಾರವಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ನಕಾರಂ ಚ ಮಕಾರಂ ಚ ಶಿಕಾರಂ ಚ ವಕಾರಕಂ |
ತಥಾ ಯಕಾರಂ ಚೈವ ಮೂಲಪಂಚಾಕ್ಷರೇ ಲಯಾಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Transliteration Innu pan̄cākṣarada nivr̥tti adentendaḍe:
Akhaṇḍa jyōtirmayavāgiha gōḷakākārapraṇavada
jyōtisvarūpadalliha nakāradalli nakāravaḍagittu.
Ā praṇavada daṇḍasvarūpadalliha makāradalli makāravaḍagittu.
Ā praṇavada kuṇḍalākāradalliha śikāradalli śikāravaḍagittu.
Ā praṇavada ardhacandrakadalliha vakāradalli vakāravaḍagittu.
Ā praṇavada darpaṇākāradalliha yakāradalli
yakāravaḍagittu nōḍā.
Idakke mahāvātulāgamē:
Nakāraṁ ca makāraṁ ca śikāraṁ ca vakārakaṁ |
tathā yakāraṁ caiva mūlapan̄cākṣarē layāḥ ||''
intendudāgi,
apramāṇakūḍalasaṅgamadēvā.