ಇನ್ನು ಮುಂದೆ ಅನುಭಾವದ ವಚನ ಅದೆಂತೆಂದಡೆ:
ಜಾಗ್ರ ಸ್ವಪ್ನಸುಷುಪ್ತಿಯೆಂಬ ಮೂರವಸ್ಥೆಯು
ಅನಂತ ಭವದುಃಖಂಗಳ ತಹವು.
ಈ ಮೂರು ಅವಸ್ಥೆಯ ಕೆಡೆಮೆಟ್ಟಿ ಸಾಕ್ಷಿಯಾಗಿಹ
ತೂರ್ಯಬೋಧೆಯ ಕಂಡವರ
ಘನವನೇನೆಂದುಪಮಿಸುವೆ ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Transliteration Innu munde anubhāvada vacana adentendaḍe:
Jāgra svapnasuṣuptiyemba mūravastheyu
ananta bhavaduḥkhaṅgaḷa tahavu.
Ī mūru avastheya keḍemeṭṭi sākṣiyāgiha
tūryabōdheya kaṇḍavara
ghanavanēnendupamisuve nōḍā,
apramāṇakūḍalasaṅgamadēvā.