ಜೀವ ಕರಣ ದೇಹ ಇತ್ಯಾದಿಗಳು
ವಿಸ್ತೀರ್ಣವಾಗಿ ಅಡಗುವದಕ್ಕೆ ಇಂಬಾಗಿ
ವಿಷಯಭಾವವು ಕೆಟ್ಟ ಭಾವುಕರ ಕಾರ್ಯ ಉಪಾಧಿ ಅರಿದು,
ಸುಷುಪ್ತಿಯ ಹಾಂಗೆ ಪರಮವಿಕೃತಿಭಾವಂಗಳು
ವಿಸ್ತೀರ್ಣವಾಗಿ ಅಡಗಿ,
ಏನೂ ಇಲ್ಲದ ಅವಾಚ್ಯಪರಮಭಾವವಾಗಿಹ
ತೂರ್ಯಾತೀತವ ಶ್ರುತಿಗಳು ಪರವೊಡಲೆಂದುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Jīva karaṇa dēha ityādigaḷu
vistīrṇavāgi aḍaguvadakke imbāgi
viṣayabhāvavu keṭṭa bhāvukara kārya upādhi aridu,
suṣuptiya hāṅge paramavikr̥tibhāvaṅgaḷu
vistīrṇavāgi aḍagi,
ēnū illada avācyaparamabhāvavāgiha
tūryātītava śrutigaḷu paravoḍalendudu nōḍā
apramāṇakūḍalasaṅgamadēvā.