ಕಣ್ಣಿಲ್ಲದಂಧಕ ಕಾಲಿಲ್ಲದ ಪಶುವ ಮೇಸುವ ನೋಡಾ.
ಕಣ್ಣಿಲ್ಲದಂಧಕ ತಗುಳುವ, ಕಾಲಿಲ್ಲದ ಪಶುವೋಡದು,
ಗಗನದಲ್ಲಿ ತಲೆಯಿಲ್ಲದ ವ್ಯಾಘ್ರ ಹಿಡಿದು ನುಂಗಿತ್ತ ಕಂಡು
ಬೆರಗಾದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Kaṇṇilladandhaka kālillada paśuva mēsuva nōḍā.
Kaṇṇilladandhaka taguḷuva, kālillada paśuvōḍadu,
gaganadalli taleyillada vyāghra hiḍidu nuṅgitta kaṇḍu
beragādenu nōḍā
apramāṇakūḍalasaṅgamadēvā.