ಮೇರುಗಿರಿಶಿಖರ ಪಶ್ಚಿಮದ್ವಾರದಲ್ಲಿ ಎರಡು ಗೂಬೆ ಹುಟ್ಟಿತ್ತು.
ಆ ಎರಡೂ ಗೂಬೆಯು ಏಕವಾಗಿ
ಆ ಅಕಾರ ಉಕಾರ ಮಕಾರವ ನುಂಗಿತ್ತು.
ನಾದ ಬಿಂದು ಕಳೆಯ ನುಂಗಿ ಕಲಾತೀತವಾಗಿ ಅತ್ತತ್ತ ಹಾರಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Mērugiriśikhara paścimadvāradalli eraḍu gūbe huṭṭittu.
Ā eraḍū gūbeyu ēkavāgi
ā akāra ukāra makārava nuṅgittu.
Nāda bindu kaḷeya nuṅgi kalātītavāgi attatta hārittu nōḍā
apramāṇakūḍalasaṅgamadēvā.