ಆರು ಬೀಜವ ಮೀರಿ ತೋರಿತ್ತು ನೋಡಾ ಒಂದು ಬೀಜ,
ಆ ಬೀಜ ಸಪ್ತಸಾಗರವ ನುಂಗಿತ್ತು,
ಅರವತ್ತಾರುಕೋಟಿ ನದಿಗಳ ನುಂಗಿತ್ತು ನೋಡಾ.
ಹದಿನಾಲ್ಕು ಕುದುರೆಯ ನುಂಗಿತ್ತು,
ಮೂರು ಕೋಣನ ನುಂಗಿತ್ತು ನೋಡಾ.
ಎಂಟಾನೆಯ ನುಂಗಿ,
ಆ ಬೀಜ ಆರಾರು ಈರಾರು ಶಾಖೆಗಳಾಗಿ
ಅಮೃತಫಲರಸತುಂಬಿ ತೊಟ್ಟಿಟ್ಟುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Āru bījava mīri tōrittu nōḍā ondu bīja,
ā bīja saptasāgarava nuṅgittu,
aravattārukōṭi nadigaḷa nuṅgittu nōḍā.
Hadinālku kudureya nuṅgittu,
mūru kōṇana nuṅgittu nōḍā.
Eṇṭāneya nuṅgi,
ā bīja ārāru īrāru śākhegaḷāgi
amr̥taphalarasatumbi toṭṭiṭṭudu nōḍā
apramāṇakūḍalasaṅgamadēvā.