ಸುಖಿಯಾಗಿ ಸುಖವರಿಯದೆ,
ದುಃಖಿಯಾಗಿ ದುಃಖವರಿಯದೆ,
ಶಿವನೆಂಬುವದರಿಯದೆ, ಜಗವೇನೆಂಬುವದರಿಯದೆ,
ನಾನು ಏನೆಂಬುವದರಿಯದೆ, ಇಹವರಿಯದೆ ಪರವರಿಯದೆ,
ಪುಣ್ಯವರಿಯದೆ ಪಾಪವರಿಯದೆ, ಸ್ವರ್ಗವರಿಯದೆ ನರಕವರಿಯದೆ,
ಬಹುಮೂಢ ಅಜ್ಞಾನವೆಂಬ
ವಿಲಾಸ ಅನಂತಕಾಲ ನಟಿಸಿರ್ದು
ಅನಂತಕಾಲವಾಯಿತ್ತೆಂಬೆ,
ಚಿಂತೆಯಿಲ್ಲದೆ ಅನಂತಕಾಲವಿರ್ದೆಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
Transliteration Sukhiyāgi sukhavariyade,
duḥkhiyāgi duḥkhavariyade,
śivanembuvadariyade, jagavēnembuvadariyade,
nānu ēnembuvadariyade, ihavariyade paravariyade,
puṇyavariyade pāpavariyade, svargavariyade narakavariyade,
bahumūḍha ajñānavemba
vilāsa anantakāla naṭisirdu
anantakālavāyittembe,
cinteyillade anantakālavirdeyallā
nirupama nirāḷa mahatprabhu mahāntayōgi.