ಪಿಂಡವಾಯಿತ್ತು ನಾದ ಬಿಂದು ಕಳೆಗಳ ಕೂಡಿ
ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ
ಧರೆಯಿಂದಲದು ಕರ್ಮೇಂದ್ರಿಯಂಗಳ ಜನನ
ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್
ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ.
ಮರುತನಿಂದೈದು ಪ್ರಾಣವಾಯುಗಳ ಜನನ
ಹಿರಿದಪ್ಪ ಗಗನದಲ್ಲಿ ಚತುರ ಕರಣವು ಆತ್ಮ
ನೆರೆ ಕೂಡಿ ಪಂಚವಂಶತಿತತ್ವವಿಡಿದು.[1]
ಆರೂರ್ಮೆ ಏಳುಧಾತೈದುವಿಂಶತಿ ಅಂಶ ಈ
ಮೂರು ತನುಗುಣವು ಇಪ್ಪತೈದು ಎರಡಂಗ
ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ
ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ
ಮೀರಿದ ಸದಾಶಿವನಧಿದೈವಂಗಳು,ನವ
ದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು.[2]
ಮೂರು ಕರ್ಮಗಳು ಏಳ್ನೂರು ಎಪ್ಪುತ್ತು
ಡೋರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ
[ರಾ]ರು ಗುಣ ಅಂತರಂಗದಷ್ಟವೇದವು ಸಹಿತದ
ಮೂರು ಮಲ ದಶವಾಯು ಅಂಗದೊಳು ಚರಿಸುತಿಹ
ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ-
ರೀರ ಜಗದೊಳುತ್ಪತ್ಯವಾಗಿದೆ ದೇವ. [3]
ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು
ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ
ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ
ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ
ಉಲಿವಂತೆ ಶಿವಬೀಜವ ಚೈತನ್ಯದಿಂದಲಿ
ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ.[4]
ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ
ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ
ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ
ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ
ಪಾದವಿಡಿದ ತನುವು ಸುಕೃತದೇಹಿಯಾಗಿ
ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ? [5]
Transliteration Piṇḍavāyittu nāda bindu kaḷegaḷa kūḍi
koṇḍu svarūpa tatvaviḍidu cennāgi
dhareyindaladu karmēndriyaṅgaḷa janana
sarasadinda pan̄caviṣayaṅgaḷutpatya mēṇ
uriyinda bud'dhīndriyaṅgaḷādavu nōḍire.
Marutanindaidu prāṇavāyugaḷa janana
hiridappa gaganadalli catura karaṇavu ātma
nere kūḍi pan̄cavanśatitatvaviḍidu.[1]
Ārūrme ēḷudhātaiduvinśati anśa ī
mūru tanuguṇavu ippataidu eraḍaṅga
āru cakravu kamaladaivattondarakṣaragaḷiṁ
vārija dākṣāyaṇi hari rudra īśvara
mīrida sadāśivanadhidaivaṅgaḷu,nava
dvāra cennāgi sakalārambhatatvaviḍidu.[2]
Mūru karmagaḷu ēḷnūru epputtu
ḍōraṇada karaṇada karaṇa aruvattāru kōṭiyaṁ mū
[rā]ru guṇa antaraṅgadaṣṭavēdavu sahitada
mūru mala daśavāyu aṅgadoḷu carisutiha
māruta mana mantri prāṇa nāyakanarasu śa-
rīra jagadoḷutpatyavāgide dēva. [3]
Nela nīru śileyinda bittigaṭṭiye adanu
sale gōmayadi śud'dhamāḍi sārisuvante
elu carma nara togalu mānsa majjeya kūḍiye
celuvāgi ī kāya gāḷi tumbi vr̥kṣa
ulivante śivabījava caitan'yadindali
iḷege tōrutire nōḍida tiḷiyiraṇṇa.[4]
Ādi madhya antya bhāṇḍadoḷu śiva tāne
ādiyāgiye nelada mareyalliha dhanadante
bhēdisadeyippa bhēdavanāru ariyaralla
abhēdyaguru paḍuviḍi sid'dhamallināthana
pādaviḍida tanuvu sukr̥tadēhiyāgi
mēdinige tōrutide śivaśaraṇarida tiḷiyare? [5]