•  
  •  
  •  
  •  
Index   ವಚನ - 179    Search  
 
ಸಂಸಾರಸುಖಕ್ಕೆ ಕಟ್ಟಿದ ಮನೆ, ಸಂಸಾರಸುಖಕ್ಕೆ ಕೊಂಡ ಹೆಣ್ಣು, ಸಂಸಾರಸುಖಕ್ಕೆ ಆದ ಮಕ್ಕಳು, ಸಂಸಾರಸುಖಕ್ಕೆ ನೆರೆದ ಬಂಧುಬಳಗ, ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ ಹೊಂದಿದ ಕ್ಷೇತ್ರ ಬೇಸಾಯ, ಸಂಸಾರ ಸುಖ-ದುಃಖ ಘನವಾಗಿ ಸತ್ತು ಸತ್ತು ಹುಟ್ಟುವ ಮಾನವರು ನಿಃಸಂಸಾರದಿಂದ ನಿಮ್ಮನರಿದು, ನಿಮ್ಮ ಜ್ಞಾನದೊಳಿಂಬುಗೊಂಡು, ಭವವಿರಹಿತರಾಗುವುದಿದನೇನಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?
Transliteration Sansārasukhakke kaṭṭida mane, sansārasukhakke koṇḍa heṇṇu, sansārasukhakke āda makkaḷu, sansārasukhakke nereda bandhubaḷaga, sansārasukhakke gaḷisida dravya, sansārasukhakke hondida kṣētra bēsāya, sansāra sukha-duḥkha ghanavāgi sattu sattu huṭṭuva mānavaru niḥsansāradinda nim'manaridu, nim'ma jñānadoḷimbugoṇḍu, bhavavirahitarāguvudidanēnaballarayya paramaguru paḍuviḍi sid'dhamallināthaprabhuve?