ಗುರುಹಸ್ತದಿಂದ ಹುಟ್ಟಿದ ಮೇಲೆ
ಶಿವಭಕ್ತನೆಂಬ ನಾಮವಾದೀತಯ್ಯಾ!
ಗುರುಹಸ್ತದಿಂದ ಹುಟ್ಟದಿದ್ದರೆ ಶಿವಭಕ್ತನೆಂಬ
ನಾಮವೆಲ್ಲಿಯದಯ್ಯಾ?
ತಮ್ಮ ಪೂರ್ವಜನ್ಮವನು ಗುರುವಿಂಗೊಪ್ಪಿಸಿ
ಪುನರ್ಜಾತರಾಗಿ
ಗುರುವಿನ ಕರುಣ ಕೃಪೆಯ ಪಡೆದ ಮೇಲೆ
ಅನ್ಯಜೀವಿಯ ಹೊಗಳುವ ನರಕಜೀವಿಯನೆನಗೊಮ್ಮೆ
ತೋರದಿರಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Guruhastadinda huṭṭida mēle
śivabhaktanemba nāmavādītayyā!
Guruhastadinda huṭṭadiddare śivabhaktanemba
nāmavelliyadayyā?
Tam'ma pūrvajanmavanu guruviṅgoppisi
punarjātarāgi
guruvina karuṇa kr̥peya paḍeda mēle
an'yajīviya hogaḷuva narakajīviyanenagom'me
tōradirayyā
paramaguru paḍuviḍi sid'dhamallināthaprabhuve.