ಸರ್ವರಲ್ಲಿ ಹುಸಿಯನಾಡಿದರೆ ಆಡಲಿ,
ಗುರುವಿನೆಡೆಗೆ ಹುಸಿಯಿಲ್ಲದಿರಬೇಕು.
ಸರ್ಪ ಕಡೆಯಲೆಲ್ಲ ಡೊಂಕಾಗಿ ಚರಿಸುತ್ತ
ಹುತ್ತದೆಡೆಗೆ ಸಸಿನವಾಗಿ ಹೋದಂತೆ.
ಅನ್ಯರೆಡೆಗೆ ಹುಸಿ ಠಕ್ಕು ಠೌಳಿ ಇದ್ದರೂ ಇರಲಿ,
ಗುರುವಿನೆಡೆಗೆ ಹುಸಿಬೇಡ.
ಕೊಟ್ಟೆ ಕೊಂಡೆನೆಂದು ನುಡಿದು ಕೊಡದೆ ವಾಚಾಳತ್ವವಾದರೆ
ಬ್ರಾಹ್ಮಣನ ಕೊಂದ ಪಾಪದಷ್ಟು ಪಾಪ
ನಿಮಗಂಡಲೆವವು ಕಾಣಿರೊ !
ಸಾಕ್ಷಿ: ಯೋ ಶುದ್ಧಿ ಗೋಪಾದಪ್ರೋಕ್ತಂ ಗುರುರಂಘ್ರಿನುತಸ್ಯ ಚ |
ವಾಗ್ವಿದನ್ಯಪ್ರದಾನೇನ ಬ್ರಹ್ಮಹತ್ಯಾಸಮಾಹಿತಃ (?) ||''
ಎಂದುದಾಗಿ,
ಇಂತಪ್ಪ ಗುರುವಿನೆಡೆಗೆ ಹುಸಿ[ದು] ಜೀವಿಸೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Sarvaralli husiyanāḍidare āḍali,
guruvineḍege husiyilladirabēku.
Sarpa kaḍeyalella ḍoṅkāgi carisutta
huttadeḍege sasinavāgi hōdante.
An'yareḍege husi ṭhakku ṭhauḷi iddarū irali,
guruvineḍege husibēḍa.
Koṭṭe koṇḍenendu nuḍidu koḍade vācāḷatvavādare
brāhmaṇana konda pāpadaṣṭu pāpa
nimagaṇḍalevavu kāṇiro!
Sākṣi: Yō śud'dhi gōpādaprōktaṁ gururaṅghrinutasya ca |
vāgvidan'yapradānēna brahmahatyāsamāhitaḥ (?) ||''
Endudāgi,
intappa guruvineḍege husi[du] jīvisenayyā
paramaguru paḍuviḍi sid'dhamallināthaprabhuve.