ಶಿರದೊಳು ಧರಿಸಲು ಕೋಟಿ ಫಲ
ಕರ್ಣದೊಳು ಧರಿಸಲು ದಶಕೋಟಿ ಫಲ
ಕೊರಳೊಳು ಧರಿಸಲು ಶತಕೋಟಿ ಫಲ.
ಬಾಹುವಿನೊಳು ಧರಿಸಲು ಸಾವಿರ ಫಲವೆಂದಿಹುದು ದೃಷ್ಟ.
ಸಾಕ್ಷಿ:
“ಶಿರಸಾ ಧಾರಣಾತ್ಕೋಟಿ ಕರ್ಣಯೋರ್ದಶಕೋಟಿ ಚ |
ಶತಂ ಕೋಟಿ ಗಳೇ ಬದ್ಧಂ ಸಾಹಸ್ರಂ ಬಾಹುಧಾರಣಾತ್ ||''
ಎಂದುದಾಗಿ,
ಹಸ್ತ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ
ಶ್ರೀ ರುದ್ರಾಕ್ಷಿಯ ಧರಿಸಿ ನಿತ್ಯ ಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Śiradoḷu dharisalu kōṭi phala
karṇadoḷu dharisalu daśakōṭi phala
koraḷoḷu dharisalu śatakōṭi phala.
Bāhuvinoḷu dharisalu sāvira phalavendihudu dr̥ṣṭa.
Sākṣi:
“Śirasā dhāraṇātkōṭi karṇayōrdaśakōṭi ca |
śataṁ kōṭi gaḷē bad'dhaṁ sāhasraṁ bāhudhāraṇāt ||''
endudāgi,
hasta bāhu ura kaṇṭha karṇa mastakadalli
śrī rudrākṣiya dharisi nitya muktanāgiddenu kāṇā
paramaguru paḍuviḍi sid'dhamallināthaprabhuve.