•  
  •  
  •  
  •  
Index   ವಚನ - 275    Search  
 
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು. ಹರನಕ್ಷಿ ಜಲದಲ್ಲುದಯವಾಗಿ ಮುನಿ ವರ ವಿಶ್ವಾಮಿತ್ರ ಗೌತಮ ವಶಿಷ್ಠರ ನೆರೆ ಮುಕ್ತರ ಮಾಡಿ ಕೈಲಾಸಪದದೊಳ ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. | 1 | ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್ ಚಿತ್ತಸಮಸ್ತಕೆ ಧಾರಣಗಳು ಅದ ರೊತ್ತಿಲಿ ಕರ್ಣಕುಂಡಲಕೆ ಏಕೈ- ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. | 2 | ಕೊರಳೊಳು ಬತ್ತೀಸ ಉರದೊಳು ಮಹಾ ಸರ ಅಷ್ಟಶತಮಾಲೆಯನುವೆ ನೀವು ಕರಕಂಕಣಕೆ ದಶಬಾಹುಪೂರಕೆ ನೆರೆ ಷೋಡಶ ರುದ್ರಕ್ಷಿಯನೊಲಿದು. | 3 | ಕರದಂಘ್ರಿಮಾಲೆಗೆ ದಶವೇಕ ಮಹಾಜಪ ಸರ [ಕೂಡಿಕೊಂಡು ಲೇಸೆಂದು] ಮೇಣ್ ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. | 4 | ಇನಿತು ತೆರದ ರುದ್ರಾಕ್ಷಿಯ ಮಹಾ ಘನವೆಂಬಲ್ಲಿ ಮುಕ್ತಿಯ ಸಾರ ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ ನೆನವ ತೋರುವ ತತ್ವಚಿಂತಾಮಣಿಯನೊಲಿದು. | 5 |
Transliteration Dharisiro śrī rudrākṣiya bāhu ura kaṇṭha karṇa mastakadalli olidu. Haranakṣi jaladalludayavāgi muni vara viśvāmitra gautama vaśiṣṭhara nere muktara māḍi kailāsapadadoḷa girisuva bhasita rudrākṣiyanolidu. | 1 | Nettiyoḷage traya śikhigēka mēṇ cittasamastake dhāraṇagaḷu ada rottili karṇakuṇḍalake ēkai- kendu vistarisi rudrākṣiyanolidu. | 2 | Koraḷoḷu battīsa uradoḷu mahā sara aṣṭaśatamāleyanuve nīvu karakaṅkaṇake daśabāhupūrake nere ṣōḍaśa rudrakṣiyanolidu. | 3 | Karadaṅghrimālege daśavēka mahājapa sara [kūḍikoṇḍu lēsendu] mēṇ viracisi śivapūjeyanu māḍe karma girigojravenipa rudrākṣiyanolidu. | 4 | Initu terada rudrākṣiya mahā ghanavemballi muktiya sāra triṇaya sadguru paḍuviḍi sid'dhamallanā nenava tōruva tatvacintāmaṇiyanolidu. | 5 |