•  
  •  
  •  
  •  
Index   ವಚನ - 300    Search  
 
ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ ವ್ಯರ್ಥವೆಂದಿತ್ತು ಗುರುವಚನ. ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ. ಜಂಗಮತೃಪ್ತಿಯಿಲ್ಲದೆ ಲಿಂಗಕ್ಕೆ ಪುಷ್ಪ ಪತ್ರಿಯನೇರಿಸಿ ಫಲವೇನು? ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ. ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ! ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ. ಸಾಕ್ಷಿ: “ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ || ಮಮ ತೃಪ್ತಿರುಮಾದೇವಿ ಉಭಯೋರ್ಲಿಂಗ ಜಂಗಮತಾ ||'' ಎಂದುದಾಗಿ, ``ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ | ಎಂದುದಾಗಿ, ಈ ಶ್ರುತ ದೃಷ್ಟ ಅನುಮಾನವ ಕಂಡು, ಮಾಡುವಾತನೆ ಸದ್ಭಕ್ತನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Bhaktiyillade gurupūjeya anantakāla māḍidarū vyarthavendittu guruvacana. Bhaktiyillade dhyāna mauna gaṅgāsnāna japatapa nēma-nitya vyarthavendittu guruvacana. Jaṅgamatr̥ptiyillade liṅgakke puṣpa patriyanērisi phalavēnu? Liṅgakke jaṅgamave bāyiyendittu guruvacana. Vr̥kṣakke bhūmi bāyiyendu nīraneredare mēle pallavisittu nōḍā! Sthāvarakke jaṅgamave bāyiyendu paḍipadārthava nīḍidare śivaṅge tr̥ptiyendittu rahasya. Sākṣi: “Vr̥kṣasya vadanaṁ bhūmiḥ sthāvarasyatu jaṅgamaḥ || mama tr̥ptirumādēvi ubhayōrliṅga jaṅgamatā ||'' endudāgi, ``sthāvarārpitanaivēdyāt na tr̥ptirmama pārvati | jaṅgamārpita naivēdyāt mama tr̥ptiśca sarvathā | endudāgi, ī śruta dr̥ṣṭa anumānava kaṇḍu, māḍuvātane sadbhaktanu kāṇā paramaguru paḍuviḍi sid'dhamallināthaprabhuve.