ಪಂಚಭೂತಂಗಳುತ್ಪತ್ತಿ ಇಲ್ಲದಂದು,
ಅಂಡಜವಳಯ ರಚಿಸದಂದು,
ಚತುರ್ದಶ ಭುವನಂಗಳಿಲ್ಲದಂದು,
ಪಂಚಾಶತಕೋಟಿ ವಿಸ್ತೀರ್ಣದ ಅನಂತಕೋಟಿ ಬ್ರಹ್ಮಾಂಡಾದಿ
ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು,
ನಾನು ನೀನೆಂಬ ವಾಕು ಹುಟ್ಟದಂದು,
ಅನಿರ್ವಾಚ್ಯ ಮಹಾಶೂನ್ಯನಾಗಿರ್ದೆಯಲ್ಲ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Pan̄cabhūtaṅgaḷutpatti illadandu,
aṇḍajavaḷaya racisadandu,
caturdaśa bhuvanaṅgaḷilladandu,
pan̄cāśatakōṭi vistīrṇada anantakōṭi brahmāṇḍādi
lōkādi lōkaṅgaḷēnuyēnū illadandu,
nānu nīnemba vāku huṭṭadandu,
anirvācya mahāśūn'yanāgirdeyalla nīnu,
mahāliṅgaguru śivasid'dhēśvara prabhuvē.