•  
  •  
  •  
  •  
Index   ವಚನ - 31    Search  
 
ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು, ಸಚ್ಚಿದಾನಂದ ಪರಬ್ರಹ್ಮ ನೀನೆಯಾಗಿ ಎಲ್ಲಾ ತತ್ತ್ವಂಗಳಿಗೆ ನೀನಾದಿಯಾಗಿ, ನಿನಗೊಂದಾದಿಯಿಲ್ಲದೆ ನೀ, ನಿರಾದಿಯಾದ ಕಾರಣ ನಿನ್ನ, ನಿಃಕಲ ಶಿವತತ್ವವೆಂದರಿದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ā sattu ā cittu ā ānandādigaḷilladandu, saccidānanda parabrahma nīneyāgi ellā tattvaṅgaḷige nīnādiyāgi, ninagondādiyillade nī, nirādiyāda kāraṇa ninna, niḥkala śivatatvavendaridenu nōḍā, mahāliṅgaguru śivasid'dhēśvara prabhuvē.