•  
  •  
  •  
  •  
Index   ವಚನ - 77    Search  
 
ವಸ್ತುವೆಂದಡೆ:ಹೇಂಗಾಯಿತ್ತಯ್ಯಾಯೆಂದಡೆ, ಹೇಳಿಹೆ ಕೇಳಯ್ಯಾ ಮಗನೆ. ಕಾಷ್ಠದಲ್ಲಿ ಅಗ್ನಿ ಹೇಂಗೆ ಹಾಂಗಿಪ್ಪುದು; ಕ್ಷೀರದೊಳಗೆ ಘೃತ ಹೇಂಗೆ ಹಾಂಗಿಪ್ಪುದು; ತಿಲದಲ್ಲಿ ತೈಲ ಹೇಂಗೆ ಹಾಂಗಿಪ್ಪುದು; ಜಲದೊಳಗೆ ಸೂರ್ಯ ಹೇಂಗೆ ಹಾಂಗಿಪ್ಪುದು; ಕನ್ನಡಿಯೊಳಗೆ ಪ್ರತಿಬಿಂಬ ಹೇಂಗೆ ಹಾಂಗಿಪ್ಪುದು; ಸರ್ವತ್ರ ಎಲ್ಲಾ ಠಾವಿನಲ್ಲಿಯೂ ವಸ್ತುವಿನ ಕಳೆ ಪರಿಪೂರ್ಣವಾಗಿಪ್ಪುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Vastuvendaḍe:Hēṅgāyittayyāyendaḍe, hēḷihe kēḷayyā magane. Kāṣṭhadalli agni hēṅge hāṅgippudu; kṣīradoḷage ghr̥ta hēṅge hāṅgippudu; tiladalli taila hēṅge hāṅgippudu; jaladoḷage sūrya hēṅge hāṅgippudu; kannaḍiyoḷage pratibimba hēṅge hāṅgippudu; sarvatra ellā ṭhāvinalliyū vastuvina kaḷe paripūrṇavāgippudembenayyā, mahāliṅgaguru śivasid'dhēśvara prabhuvē.