ದೇವಸ್ತ್ರೀಯರ ಸಂಗಕ್ಕೆ ಎಣಿಸುವದೆಲ್ಲ ಕಾಯಗುಣ ಕಾಣಿರಣ್ಣಾ.
ಆವ ಹಾವಾದಡೇನು ವಿಷವೊಂದೇ ನೋಡಾ,
ಮಾಯಿಕಕ್ಕೆ ದೇವತ್ವವುಂಟೇ ಮರುಳು ಮಾನವ?
ಮಹಾದೇವನೇ ದೇವನಲ್ಲದೆ, ಅನಿತ್ಯವಾದ ಮಾಯಾ ಪ್ರಪಂಚು
ನಿತ್ಯವಾದ ಶಿವನ ನೆನೆದರೆ ಕೆಡುವುದು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Dēvastrīyara saṅgakke eṇisuvadella kāyaguṇa kāṇiraṇṇā.
Āva hāvādaḍēnu viṣavondē nōḍā,
māyikakke dēvatvavuṇṭē maruḷu mānava?
Mahādēvanē dēvanallade, anityavāda māyā prapan̄cu
nityavāda śivana nenedare keḍuvudu kāṇā,
mahāliṅgaguru śivasid'dhēśvara prabhuvē.