ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗೆದು
ಶಿವಲಿಂಗಮೂರ್ತಿಯ ಮಾಡಿ
ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು.
ಆ ಲಿಂಗವು ಸರ್ವಾವಸ್ಥೆಯಲ್ಲಿಯೂ
ಅಂಗವ ಬಿಟ್ಟು ಅಗಲಲಾಗದುಯೆಂದು
ನಿರೂಪಿಸಿದನಯ್ಯ ಶ್ರೀಗುರು. ಇದು ಕಾರಣ,
ಅಂಗವ ಬಿಟ್ಟು ಲಿಂಗ ನಿಮಿಷಾರ್ಧವಗಲಿದಡೆ,
ನಾಯಕನರಕ ತಪ್ಪದಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Enna prāṇanoḷage hūḷirda paramakaḷeya tegedu
śivaliṅgamūrtiya māḍi
enna karasthalakke koṭṭanayya śrīguru.
Ā liṅgavu sarvāvastheyalliyū
aṅgava biṭṭu agalalāgaduyendu
nirūpisidanayya śrīguru. Idu kāraṇa,
aṅgava biṭṭu liṅga nimiṣārdhavagalidaḍe,
nāyakanaraka tappadayya,
mahāliṅgaguru śivasid'dhēśvara prabhuvē.