•  
  •  
  •  
  •  
Index   ವಚನ - 203    Search  
 
ಓಂಕಾರವೆ ಪಂಚಭೂತಾತ್ಮಮಯ ನೋಡಾ. ನಕಾರವೆ ದಶೇಂದ್ರಿಯ, ಮಃಕಾರವೆ ಮನಪಂಚಕಂಗಳು ನೋಡಾ. ಶಿಕಾರವೆ ಪ್ರಾಣಸ್ವರೂಪು, ವಾಕಾರವೆ ದಶವಾಯುಗಳಸ್ವರೂಪು, ಯಕಾರವೆ ತ್ರಿಗುಣಸ್ವರೂಪು ನೋಡಾ. ಓಂಕಾರವೆ ಪಾದಾದಿ ಮಸ್ತಕ ಪರಿಯಂತರ ಪರಿಪೂರ್ಣವಾಗಿ ತ್ವಗುಮಯವಾಗಿಪ್ಪುದು. ನಕಾರವೇ ರುಧಿರಮಯವಾಗಿಪ್ಪುದು. ಮಃಕಾರವೆ ಮಾಂಸಮಯವಾಗಿಪ್ಪುದು. ಶಿಕಾರವೆ ಮೇದಸ್ಸುಮಯವಾಗಿಪ್ಪುದು. ವಾಕಾರವೆ ಅಸ್ಥಿಮಯವಾಗಿಪ್ಪುದು. ಯಕಾರವೆ ಮಜ್ಜಾಮಯವಾಗಿಪ್ಪುದು. ಈ ಷಡಕ್ಷರಮಂತ್ರವೆಲ್ಲವು ಕೂಡಿ ಶುಕ್ಲಮಯವಾಗಿಪ್ಪುದು ನೋಡಾ.ಇದು ಕಾರಣ, ಶರಣನ ಸಪ್ತಧಾತು ಸರ್ವೇಂದ್ರಿಯ ವಿಷಯ ಕರಣಂಗಳೆಲ್ಲವು ಷಡಕ್ಷರಮಂತ್ರಮಯವಾಗಿಪ್ಪವು.ಇದು ಕಾರಣ, ಶರಣನ ಶರೀರವೆ ಶಿವನ ಶರೀರ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ōṅkārave pan̄cabhūtātmamaya nōḍā. Nakārave daśēndriya, maḥkārave manapan̄cakaṅgaḷu nōḍā. Śikārave prāṇasvarūpu, vākārave daśavāyugaḷasvarūpu, yakārave triguṇasvarūpu nōḍā. Ōṅkārave pādādi mastaka pariyantara paripūrṇavāgi tvagumayavāgippudu. Nakāravē rudhiramayavāgippudu. Maḥkārave mānsamayavāgippudu. Śikārave mēdas'sumayavāgippudu. Vākārave asthimayavāgippudu. Yakārave majjāmayavāgippudu. Ī ṣaḍakṣaramantravellavu kūḍi śuklamayavāgippudu nōḍā.Idu kāraṇa, śaraṇana saptadhātu sarvēndriya viṣaya karaṇaṅgaḷellavu ṣaḍakṣaramantramayavāgippavu.Idu kāraṇa, śaraṇana śarīrave śivana śarīra nōḍā, mahāliṅgaguru śivasid'dhēśvara prabhuvē.