ಅಷ್ಟವಿಧಾರ್ಚನೆಯ ಮಾಡಿದರೇನೋ
ತನುಗುಣಂಗಳ ಮೆಟ್ಟಿ ಮುರಿಯದನ್ನಕ್ಕರ?
ಷೋಡಶೋಪಚಾರವ ಮಾಡಿದರೇನೋ
ಸೂಳೆಯರಂತೆ ಹಲವು ಕಡೆಗೆ ಹೋಹ ಮನವ
ನೆನಹಿನ ಹಸ್ತದಲ್ಲಿ ಹಿಡಿದು ಇಷ್ಟಲಿಂಗದಲ್ಲಿ ನೆನಹ ಗಟ್ಟಿಗೊಳಿಸಿ
ಕೃತನಿಶ್ಚಯದಿಂ ದೃಢವಿಡಿದು ಅನಿಷ್ಟವ ಪರಿಹರಿಸಬಲ್ಲರೆ
ಆತನೆ ಶಿವಲಿಂಗಾರ್ಚಕನು; ಲಿಂಗಧ್ಯಾನ ಸಂಪನ್ನನು;
ಲಿಂಗವಲ್ಲದನ್ಯವನರಿಯದ ಅಚಲಿತ ಮಹಿಮನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Aṣṭavidhārcaneya māḍidarēnō
tanuguṇaṅgaḷa meṭṭi muriyadannakkara?
Ṣōḍaśōpacārava māḍidarēnō
sūḷeyarante halavu kaḍege hōha manava
nenahina hastadalli hiḍidu iṣṭaliṅgadalli nenaha gaṭṭigoḷisi
kr̥taniścayadiṁ dr̥ḍhaviḍidu aniṣṭava pariharisaballare
ātane śivaliṅgārcakanu; liṅgadhyāna sampannanu;
liṅgavalladan'yavanariyada acalita mahimanu nōḍā,
mahāliṅgaguru śivasid'dhēśvara prabhuvē.