ಆದಿಯಲ್ಲಿ ನಾ ಹುಟ್ಟುವಂದು ಎನ್ನ ಒಡಹುಟ್ಟಿದರೈವರು ನೋಡಾ.
ಒಡಹುಟ್ಟಿದರೈವರು ಎನಗೆ ಒಡಲಾಗಿಪ್ಪರು ನೋಡಾ.
ಒಡಲನುರಿಗಿತ್ತು ಎನ್ನ ನಿಮಗಿತ್ತು ನಿರ್ವಯಲಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ādiyalli nā huṭṭuvandu enna oḍahuṭṭidaraivaru nōḍā.
Oḍahuṭṭidaraivaru enage oḍalāgipparu nōḍā.
Oḍalanurigittu enna nimagittu nirvayalādenu kāṇā,
mahāliṅgaguru śivasid'dhēśvara prabhuvē.