•  
  •  
  •  
  •  
Index   ವಚನ - 285    Search  
 
ಹೆಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಮಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಹೊನ್ನು ಪ್ರಾಣವೆ ಪ್ರಾಣವಾಗಿಪ್ಪರಯ್ಯ. ಈ ಹೆಣ್ಣು ಮಣ್ಣು ಹೊನ್ನೆಂಬಿವು ಪ್ರಾಣಂಗೆ ಪ್ರಪಂಚು ಭಾವವೆಂದರಿದು ಪ್ರಾಣಂಗೆ ಲಿಂಗಕಳೆಯ ಸಂಬಂಧಿಸಿ ಲಿಂಗಕ್ಕೆ ಪ್ರಾಣಕಳೆಯ ಸಂಬಂಧಿಸಿ ಪ್ರಾಣ ಲಿಂಗವೆಂಬ ಪ್ರತಿಭಾವ ತೋರದೆ ಅಪ್ರತಿಮ ಲಿಂಗಸಂಬಂಧಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Heṇṇu prāṇave prāṇavāgipparayya. Maṇṇu prāṇave prāṇavāgipparayya. Honnu prāṇave prāṇavāgipparayya. Ī heṇṇu maṇṇu honnembivu prāṇaṅge prapan̄cu bhāvavendaridu prāṇaṅge liṅgakaḷeya sambandhisi liṅgakke prāṇakaḷeya sambandhisi prāṇa liṅgavemba pratibhāva tōrade apratima liṅgasambandhiyāgirdenu kāṇā, mahāliṅgaguru śivasid'dhēśvara prabhuvē.