ತತ್ವರ್ಥವ ಬಲ್ಲೆವೆಂಬರಯ್ಯಾ ತತ್ತಿಯೊಳಗಣ ಬಾಲಕರು.
ತತ್ವನುಭಾವ ಸಂಭವಿಸಿದರೆ ಸತ್ತು ಹೋಗಲುಂಟೆ?
ಸತ್ತು ಹೋಗುವ ಪ್ರಾಣಿಗಳ ಶಿವತತ್ವನುಭಾವಿಗಳೆಂತೆಂಬೆನಯ್ಯ?
ಅನುಪಮ ಅದ್ವಯರೆಂತೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Tatvarthava ballevembarayyā tattiyoḷagaṇa bālakaru.
Tatvanubhāva sambhavisidare sattu hōgaluṇṭe?
Sattu hōguva prāṇigaḷa śivatatvanubhāvigaḷentembenayya?
Anupama advayarentembenayya?
Mahāliṅgaguru śivasid'dhēśvara prabhuvē.