•  
  •  
  •  
  •  
Index   ವಚನ - 364    Search  
 
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾಧಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಭೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ಲವರ್ಣನೀ. ಹೃದಯಸ್ಥಾನದಲ್ಲಿರ್ದು ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದುಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಭಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ರೋ] ಮನಾಳಂಗಳಿಗೆ ಹಂಚಿಕ್ಕುವದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ರೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂರ್ಮವಾಯುವ ಶ್ವೇತವರ್ಣ.ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳಿ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ.ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ.ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂಧಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಙಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾಧಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾತ್ಮ ಲಿಂಗ[ರ್ಥ]ಚಿಹ್ನವೆಂದರಿದು[ಆ ಲಿಂಗವನೇ] ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕ್ರಿಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂಧಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಭಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾಧಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ್ಯ, ಬಿಂದುಲಕ್ಷ್ಯ, ಕಲಾಲಕ್ಷ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ [ತೃಪ್ತಿ]ಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration ama, niyama, āsana, prāṇāyāma, pratyāhāra, dhyāna, dhāraṇa, samādhi endu īyeṇṭu aṣṭāṅgayōgaṅgaḷu. Ī yōgaṅgaḷoḷage uttarabhāga, pūrvabhāgeyendu eraḍu prakāravāgihavu. Yamādi pan̄cakavaidu pūrvayōga; dhyāna, dhāraṇa, samādhiyendu mūru uttarayōga. Ivakke vivara: Innu yamayōga adakke vivara: Anr̥ta, hinse, paradhana, parastrī, paraninde intivaidanu biṭṭu liṅgapūjeya māḍuvudīga yamayōga. Innu niyamayōga- adakke vivara: Brahmacāriyāgi nirapēkṣanāgi āgamadharmaṅgaḷalli naḍevavanu. Śivanindeya kēḷadihanu. Indriyaṅgaḷa nigrahava māḍuvavanu. Mānasa, vācasa, upānśikavemba trikaraṇadalli praṇava pan̄cākṣariya smarisutta śuciyāgihanu. Āśucittava biṭṭu vibhūti rudrākṣeya dharisi śivaliṅgārcanatatparanāgi pāpakke bhītanāgihanu. Idu niyamayōga. Innu āsanayōga- adakke vivara: Sid'dhāsana, padmāsana, svastikāsana, ardhacandrāsana, paryaṅkāsana ī aidu āsanayōgaṅgaḷalli svasthiracittanāgi mūrtigoṇḍu śivaliṅgārcaneya māḍuvudīga āsanayōga. Innu prāṇāyāma- adakke vivara: Prāṇa, apāna, vyāna, udāna, samāna, nāga, kūrma, kr̥kara, dēvadatta, dhanan̄jayavemba daśavāyugaḷu. Ivakke vivara: Prāṇavāyu indra lavarṇanī. Hr̥dayasthānadallirdu uṅguṣṭhatoḍagi vā[ṇā]grapariyantaradalli satprāṇisikoṇḍu ucchāsa niśvāsanaṅgeydu Anna jīrṇīkaraṇavaṁ māḍisuttihudu. Apānavāyu haritavarṇa. Gudhasthānadallirdu malamūtraṅgaḷa visarjaneyaṁ māḍisi ādhōdvāramaṁ balidu annarasa vyāptiyaṁ māḍisuttihudu. Vyānavāyu gōkṣiravarṇa. Sarvasandigaḷallirdu nīḍikoṇḍirdudanu muduḍikoṇḍirdudanu anumāḍisi annapānava tumbisuttihudu. Udānavāya eḷemin̄cinavarṇa. Kaṇṭhasthānadallirdusīnuva, kem'muva, kanasa kāṇuva, ēḷisuva chardinirōdhanaṅgaḷaṁ māḍi anna rasava āhārasthānaṅgeyisuttihudu. Samānavāyu nīlavarṇa. Nābhisthānadallirdu Apādamastaka pariyantara dēhamaṁ pasarisikoṇḍanthā annarasavanu ellā[rō] manāḷaṅgaḷige han̄cikkuvadu. Ī aidu prāṇapan̄caka. Innu nāgavāyu pītavarṇa. [Rō] manāḷaṅgaḷallirdu calaneyillade hāḍisuttihudu. Kūrmavāyuva śvētavarṇa.Udara lalāṭadallirdu śarīramaṁ tāḷdu [dēhamaṁ] puṣṭiyaṁ māḍikoṇḍu bāya muccutta terevutta nētradalli unmīlana nimīlanavaṁ māḍisuttihudu. Kr̥karavāyu an̄janavarṇa. Nāsikāgradallirdu kṣudhādi dharmaṅgaḷaṁ negaḷi gamanāgamanaṅgaḷaṁ māḍisuttihudu. Dēvadattavāyu sphaṭikavarṇa.Guhya[kaṭi] sthānadallirdu kuḷḷirdalli malagisi, malagirdalli ēḷisi nindirisi cētarisi oralisi mātāḍisuttihudu. Dhanan̄jayavāyu nīlavarṇa.Brahmarandhradallirdu karṇadalli samudraghōṣamaṁ ghōṣisi maraṇagālakke nirghōṣamappudu. Ī prakāradalli mūlavāyuvondē sarvāṅgadalli sarvatōmukhavāgi carisuttihudu. Ā pavanadoḍane prāṇa kūḍi prāṇadoḍane pavana kūḍi hr̥daya sthānadalli nindu hansanenisikoṇḍu ādhāra, svādhiṣṭhāna, maṇipūraka, anāhata, viśud'dhi, āgnēya emba ṣaḍucakradaḷaṅgaḷamēle suḷidu navanāḷaṅgaḷoḷage carisuttihudu. Aṣṭadaḷaṅgaḷē āśrayavāgi aṣṭadaḷaṅgaḷa meṭṭi carisuva hansanu aṣṭadaḷaṅgaḷinda viśud'dhicakravaneydi allinda nāsikāgradalli hadināraṅgula pramāṇa horasūsuttihudu; hanneraḍaṅgula pramāṇa oḷage tumbuttihudu. Hīṅge rēcaka pūrakadinda maruta carisuttiralu samastra prāṇigaḷa āyuṣyavu dina dinakke kunduttihudu. Hīṅge īḍā piṅgaḷadalli carisuva rēcaka pūrakaṅgaḷa bhēdavanaridu mana pavanaṅgaḷa mēle liṅgava sambandhisi mana pavana prāṇaṅgaḷa liṅgadoḍane kūḍi liṅga svarūpava māḍi vāyu prāṇatvava kaḷedu liṅga prāṇiya māḍi hr̥daya kamala madhyadalli praṇavavanuccarisutta paraśiva dhyānadalli taraharavāgippudīga prāṇāyāma. Innu pratyāhārayōga-adakke vivara: Āhāradiṁ nidre, nidreyiṁ indriyaṅgaḷu, indriyaṅgaḷinda viṣayaṅgaḷu ghanavāguttihuvu nōḍā. Ā viṣayadinda duḥkarmagaḷa mige māḍi jīvaṅge bhava bhavada bandhanavanoḍagūḍi āyasaṁ baḍuttipparajṅāna karmigaḷu; ī avastheya hogadiharu sujñāni dharmigaḷu. Adarindalāhāramaṁ krama kramadinda udarakke havaṇisuttabahudu. Guru kr̥peyinda ī prakāradalli sarvēndriyaṅgaḷanu liṅgamukhadinda Sāvadhānava māḍikoṇḍippudīga pratyāhārayōga. Ī aidu pūrvayōgaṅgaḷu. Innu dhyāna, dhāraṇa, samādhiyendu mūru uttarayōgaṅgaḷu. Innu dhyānayōga- adakke vivara: Antaraṅgada śud'dha paramātma liṅgavanē śivaliṅga svarūpava māḍi karasthalakke śrīguru tandu koṭṭanāgi ā karasthaladallidda śivaliṅgavē paramātma liṅga[rtha]cihnavendaridu[ā liṅgavanē] Ādhāra, svādhiṣṭhāna, maṇipūraka, anāhata, viśud'dhi, ājñēya, brahmarandhra mukhyavāda sthānaṅgaḷalli ā śivaliṅgamūrtiyane āhvāna visarjaneyillade dhyānipudīga dhyānayōga. Ā liṅgava bhāva, mana, karaṇa mukhyavāda sarvāṅgadalli dharisuvudīga dhāraṇayōga. Ā satkriyā jñānayōgadinda prāṇaṅge śivakaḷeya sambandhisi iṣṭa, prāṇa, bhāvavemba liṅgatrayavanu ēkākārava māḍi akhaṇḍa paripūrṇa kēvala paran̄jyōti svarūpavappa mahāliṅgadoḷage sanyōgavāgi Bhinnavillade ēkārthavāgihudīga samādhiyōga. Intī aṣṭāṅgayōgadalli śivaliṅgārcaneya māḍi śivatatvadoḍane kūḍuvudīga liṅgāṅgayōga. Innu karmakāṇḍigaḷu māḍuva karmayōgaṅgaḷu- avāvavendaḍe: Yama, niyama, āsana, prāṇāyāma, pratyāhāravemba ī aidanu liṅgavirahitavāgi māḍuttipparāgi ī aidu karmayōgaṅgaḷu. Avaru lakṣisuvanthā vastugaḷu uttarayōgavāgi mūru tera. Avāvavendaḍe: Nādalakṣya, bindulakṣya, kalālakṣyavendu mūru tera. Nādavē sākṣāt paratatvavendē lakṣisuvaru. Binduvē ākāra, ukāra, makāra, ī mūru śud'dhabindu sambandhavendū. Ā śud'dha binduvē kēvala divya prakāśavanuḷḷadendū lakṣisuvaru. Kaleyē candrana kaleya hāṅge, sūryana kiraṇaṅgaḷa hāṅge, min̄cugaḷa prakāśada hāṅge, muttu, māṇikya, navaratnada dīptigaḷa hāṅge, prakāśamāyavāgihudendu lakṣisuvudīga kalālakṣya. Ī eṇṭu itara matadavaru māḍuva yōgaṅgaḷu. Iva liṅgavirahitavāgi māḍuvarāgi karmayōgaṅgaḷu. Ī karmakauśalyadalli liṅgavilla nōḍā. Adukāraṇa iva muṭṭalāgadu. Innu vīramāhēśvararugaḷa liṅgasandhānaventendare: Brahmarandhradallippa nāda caitan'yavappa parama c