•  
  •  
  •  
  •  
Index   ವಚನ - 472    Search  
 
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ. ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ. ಇದೇ ಸಂಸಾರವೆಂಬುದನರಿಯದೆ ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು ವಿರಕ್ತನಾದೆನೆಂಬ ಅಜ್ಞಾನಿಯ ಪರಿಯ ನೋಡಾ. ಇದು ವಿರಕ್ತಿಯೇ? ಅಲ್ಲ. ದೇಹೇಂದ್ರಿಯ ಮನಃಪ್ರಾಣಾದಿಗಳ ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು. ಆತಂಗೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Kāyavemba vanitege ātmanemba puruṣanu nōḍā. Ī dēhada ātmana samparkadinda huṭṭida sakala karaṇēndriyaṅgaḷe makkaḷu nōḍā. Idē sansāravembudanariyade bahiraṅgadalli, nānu honnu heṇṇu maṇṇu biṭṭu viraktanādenemba ajñāniya pariya nōḍā. Idu viraktiyē? Alla. Dēhēndriya manaḥprāṇādigaḷa mahadalli oḍagūḍidātanē parama viraktanu. Ātaṅge namō namōyembenu kāṇā, mahāliṅgaguru śivasid'dhēśvara prabhuvē.